ಲಕ್ಷಾಂತರ ಗುರುಕುಲಗಳಿದ್ದ ನಮ್ಮ ಭಾರತದಲ್ಲಿಂದು ಬೆರಳೆಣಿಕೆಯಷ್ಟೇ ಗುರುಕುಲಗಳಿರುವುದು ನಮ್ಮ ದೌರ್ಭಾಗ್ಯವಲ್ಲವೇ. ವೇದಗಳ ಅಧ್ಯಯನ ಹ್ರಾಸವಾಗುತ್ತಿದ್ದು ಸಾಂಪ್ರದಾಯಕವಾಗಿ ಸಂಪೂರ್ಣ ವೇದಾಧ್ಯಯನವನ್ನು ಮಾಡುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಇದನ್ನು ಮನಗಂಡು ನಮ್ಮ ಕರ್ತವ್ಯವನ್ನು ಪಾಲಿಸಬೇಕೆಂಬ ಸದುದ್ದೇಶದಿಂದ ಶ್ರೀದಕ್ಷಿಣಾಮ್ನಾಯ ಶ್ರೀಶೃಂಗೇರಿ ಶಾರದಾಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶ್ರೀಭಾರತೀತೀರ್ಥ ಮಹಾಸನ್ನಿಧಾನದವರ ಹಾಗೂ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀವಿಧುಶೇಖರಭಾರತೀ ಸನ್ನಿಧಾನದವರ ಪೂರ್ಣಾನುಗ್ರಹದಿಂದ ಶ್ರೀಶಾರ್ವರೀನಾಮ ಸಂವತ್ಸರ ಮಾಘ ಶುದ್ಧತೃತೀಯಾ ಭಾನುವಾರ ೧೪-೦೨-೨೦೨೧ ರಂದು ಶ್ರೀಶ್ರುತಿಪರಂಪರಾ ಗುರುಕುಲವನ್ನು ಸ್ಥಾಪಿಸಲಾಗಿದೆ.
ಸಂಪೂರ್ಣ ೧೨ವರ್ಷಗಳ ಕಾಲ ಋಗ್ವೇದ,ಕೃಷ್ಣಯಜುರ್ವೇದಗಳ ಸಲಕ್ಷಣ ಘನಾಂತದ ವರೆಗಿನ ವೇದಾಧ್ಯಯನ, ಸಂಸ್ಕೃತಾಧ್ಯಯನವನ್ನು ಸಂಪೂರ್ಣ ಉಚಿತವಾಗಿ ಊಟೋಪಚಾರಗಳೊಂದಿಗೆ ವ್ಯವಸ್ಥೆಮಾಡಲಾಗಿದೆ.
(ವ್ಯಾವಹಾರಿಕ ದೃಷ್ಟಿಯಿಂದ ಕನ್ನಡ,ಆಂಗ್ಲ ಭಾಷಾಭ್ಯಾಸ,ಗಣಿತ,ಕಂಪ್ಯೂಟರ್ ತರಬೇತಿಗಳನ್ನು ನೀಡಲಾಗುವುದು.)
೧೬-೦೬-೨೦೨೨ ಗುರುವಾರದಂದು ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಶ್ರೀಮಜ್ಜಗದ್ಗುರು ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಶ್ರೀಶ್ರುತಿಪರಂಪರಾ ಗುರುಕುಲಕ್ಕೆ ಆಗಮಿಸಿ ಅನುಗ್ರಹಿಸಿರುತ್ತಾರೆ.
ಅದೇ ರೀತಿಯಾಗಿ ಹಲವುಜನ ಯತೀಶ್ವರರು,ವಿದ್ವಾಂಸರು,ಸಮಾಜದ ಗಣ್ಯವ್ಯಕ್ತಿಗಳು ನಮ್ಮ ಗುರುಕುಲಕ್ಕೆ ಆಗಮಿಸಿ ಆಶೀರ್ವದಿಸಿ,ಸೂಕ್ತಸಲಹೆಗಳನ್ನು ನೀಡಿ ಪ್ರೋತ್ಸಾಹಿಸಿರುತ್ತಾರೆ.




© 2025. All rights reserved.
ಶ್ರೀ ಶ್ಯಾಮಸುಂದರ ಶರ್ಮ, ಋಗ್ವೇದ ಸಲಕ್ಷಣ ಘನಪಾಠಿಗಳು
19/1, ಶಂಕರ ರೆಸಿಡೆನ್ಸಿ, 7ನೇ A ಮುಖ್ಯರಸ್ತೆ, ಶ್ರೀನಿಧಿ ಬಡಾವಣೆ
ಜೆ.ಪಿ. ನಗರ, ಬೆಂಗಳೂರು 560062, +91 9845705862 +91 8618945656
