ಶ್ರೀಶ್ರುತಿಪರಂಪರಾ ಗುರುಕುಲದ ಸ್ಥಾಪಕರ ಪರಿಚಯ

ಹೆಸರು - ಎಸ್.ಶ್ಯಾಮಸುಂದರ ಶರ್ಮಾ

ತಂದೆಯ ಹೆಸರು - ಶ್ರೀ ಪಿ.ಎಸ್ ಸಾಂಬಮೂರ್ತಿ ಶರ್ಮಾ

ತಾಯಿಯ ಹೆಸರು - ಶ್ರೀಮತಿ ಶ್ರೀಲಕ್ಷ್ಮೀಸಾಂಬಮೂರ್ತಿ

ಪತ್ನಿಯ ಹೆಸರು :- ಶ್ರೀಮತಿ ಭವ್ಯಶ್ರೀ ಶ್ಯಾಮಸುಂದರ

ಜನ್ಮ ಸ್ಥಳ - ಹೋಸೂರು(ತಮಿಳುನಾಡು)

ಕುಲದ ಹೆಸರು - ಗನ್ನಿಮಿಟ್ಟ

ಗೋತ್ರ - ಆತ್ರೇಯಸ

ವೇದ ಶಾಖಾ - ಋಗ್ವೇದ(ಶಾಕಲ)

ಸೂತ್ರ - ಆಶ್ವಲಾಯನ

ವಿದ್ಯಾಗುರುಗಳು

ಋಗ್ವೇದ :

  • ವೇ।ಬ್ರ| ಶ್ರೀ ಕಳಸೇಶ್ವರ ಭಟ್ ಘನಪಾಠಿಗಳು

  • ವೇ।ಬ್ರ| ಶ್ರೀ ಬಿ.ಕೆ.ಲಕ್ಷ್ಮೀನಾರಾಯಣ ಭಟ್ ಘನಪಾಠಿಗಳು

ಯಜುರ್ವೇದ :

  • ವೇ।ಬ್ರ। ಶ್ರೀ ಪ್ರಕಾಶ ಭಟ್ಟರು

  • ವೇ।ಬ್ರ। ಶ್ರೀ ಲಕ್ಷ್ಮೀಶ ಭಟ್ಟರು

ಅಧ್ಯಯನ ಮಾಡಿದ ಪಾಠಶಾಲೆಗಳ ವಿವರ : -

  • ಶ್ರೀ ಭಾರತೀಯಗೀರ್ವಾಣ ಪ್ರೌಢವಿದ್ಯಾಭಿವರ್ಧಿನೀ ಸಂಸ್ಕೃತ ಮಹಾಪಾಠಶಾಲಾ

  • ಶ್ರೀ ಶೃಂಗೇರಿಶಂಕರ ಮಠ - ಬೆಂಗಳೂರು (2000-2005)

  • ಶ್ರೀ ಮೇಧಾದಕ್ಷಿಣಾಮೂರ್ತಿ ಸಂಸ್ಕೃತ ವಿಶ್ವವಿದ್ಯಾಲಯ - ಗೋಕರ್ಣ (2005-2007)

  • ವೇದಾವಾಸಃ - ಕುಂದಾಪುರ (2007-2008)

  • SMSP ಸಂಸ್ಕೃತ ಕಾಲೇಜ್ -ಉಡುಪಿ (2009)

ಅಧ್ಯಯನ :-

  1. ಋಗ್ವೇದ ಸಲಕ್ಷಣ ಘನಾಂತ -M.A

  2. ಶ್ರೌತ ಮತ್ತು ಸ್ಮಾರ್ತ ವಿದ್ವತ್ -M.A

  3. ಸಂಸ್ಕೃತ - M.A

  4. ಸಂಸ್ಕೃತ- ಸಾಹಿತ್ಯ

ವಿಳಾಸ : -

ನಂ.19/1, ಶಂಕರ್ ರೆಸಿಡೆನ್ಸಿ,

7A ಮುಖ್ಯರಸ್ತೆ, 8ನೆ ಅಡ್ಡರಸ್ತೆ, ಶ್ರೀನಿಧಿ

ಬಡಾವಣೆ, ಜೇ.ಪಿ ನಗರ 8ನೇ ಹಂತ

ಬೆಂಗಳೂರು -560062

ಫೋನ್ ಸಂಖ್ಯೆ - 09845705862

ಸಾಗಿಬಂದ ದಾರಿ

* ಶ್ರೀ ಜಯೇಂದ್ರ ಸರಸ್ವತೀ ವೇದಮಂಡಲಮ್ - (2009 ರಿಂದ - 2015 ವರೆಗೆ) - ಋಗ್ವದ ವಿಭಾಗದ ಮುಖ್ಯಾಧ್ಯಾಪಕರಾಗಿ ಸೇವೆ.

* 2012 ರಿಂದ ತಿರುಮಲ ತಿರುಪತಿ ದೇವಸ್ಥಾನದ ವೇದಪಾರಾಯಣದಾರ್ ಆಗಿ ಸೇವೆ.

* 2020 ರಲ್ಲಿ ಶ್ರೀ ಆಶ್ವಲಾಯನ ವೃಂದದ ಸ್ಥಾಪನೆ ಮತ್ತು ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ.

* ಶ್ರೀ ಮಾಗಡಿ ಕರಣಿಕರ ವೈದಿಕಧರ್ಮಪಾಠಶಾಲಾ (2015 ರಿಂದ - 2020 ವರೆಗೆ) ಋಗ್ವೇದ ವಿಭಾಗದ ಮುಖ್ಯಾಧ್ಯಾಪಕರಾಗಿ ಸೇವೆ.

* 2021- ಫೆಬ್ರವರಿಯಲ್ಲಿ ಶ್ರೀ ಶ್ರುತಿಪರಂಪರಾ ಗುರುಕುಲಮ್(ವೇದಪಾಠಶಾಲಾ) ಸ್ಥಾಪನೆ. ಪ್ರಸ್ತುತ ಅಧ್ಯಕ್ಷರು ಮತ್ತು ಪ್ರಾಚಾರ್ಯರಾಗಿ ಸೇವೆ.

* 2023 ರಲ್ಲಿ ಬೆಂಗಳೂರಿನ ಗಿರಿನಗರದಲ್ಲಿ ಶ್ರೀಶ್ರುತಿಪರಂಪರಾ ವೇದ ಮತ್ತು ಸಂಸ್ಕೃತ ಪಾಠಶಾಲೆಯ ಸ್ಥಾಪನೆ.

* 2024 ಶ್ರೀ ಭಾರತೀತೀರ್ಥವೇದಪಾಠಶಾಲಾ (ಶ್ರೀಶೃಂಗೇರಿ ಶಂಕರಮಠ, ಬೆಂಗಳೂರು) ಮುಖ್ಯನಿಯಂತ್ರಣಾಧಿಕಾರಿಯಾಗಿ ಸೇವೆ

ಬಿರುದುಗಳು -

  1. ಋಗ್ವೇದ ಭೂಷಣಮ್ ,ಋಗ್ವೇದ ನಿಧಿಃ ,ವೇದಮಾರ್ತಾಂಡ ಮುಂತಾದ ಬಿರುದುಗಳು.

  2. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ಋಗ್ವೇದ ವಿಭಾಗದಲ್ಲಿ ಸ್ವರ್ಣಪದಕ ಪಡೆಯಲಾಗಿದೆ.

ವೇದಸೇವೆ

  • 2010 ರಲ್ಲಿ ಶ್ರೀ ಶೃಂಗೇರಿ ಜಗದ್ಗುರುಗಳ ಷಷ್ಠಿ ಪೂರ್ತಿಯಲ್ಲಿ ನಡೆದ ಋಕ್ಸಂಹಿತಾ ಯಾಗದಲ್ಲಿ ಋತ್ವಿಜರಾಗಿ, 2021ರ ದಿವ್ಯಸಪ್ತತಿಯಲ್ಲಿ ನಡೆದ ಋಕ್ಸಂಹಿತಾ ಯಾಗದಲ್ಲಿ ಆಚಾರ್ಯರಾಗಿ ಸೇವೆ ಸಲ್ಲಿಸಲಾಗಿದೆ.

  • 2012 ರಲ್ಲಿ ತಿರುಮಲ ತಿರುಪತಿ ದೇವಸ್ಥಾನದಲ್ಲಿ ನಡೆದ ಋಕ್ಸಂಹಿತಾ ಯಾಗದ ಆಚಾರ್ಯರಾಗಿ ಸೇವೆ ಸಲ್ಲಿಸಲಾಗಿದೆ.

  • 2023 ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಟ್ರಸ್ಟಿನ ವತಿಯಿಂದ ನಡೆದ ಸಂಹಿತಾಯಾಗದಲ್ಲಿ ಋತ್ವಿಜರಾಗಿ ಭಾಗವಹಿಸುವಿಕೆ.

  • 2025ರಲ್ಲಿ ಪ್ರಯಾಗದ ಮಹಾಕುಂಭಮೇಳದಲ್ಲಿ ನಡೆದ ಚತುರ್ವೇದ ಪಾರಾಯಣದಲ್ಲಿ ಭಾಗವಹಿಸುವಿಕೆ.

  • ಹಲವು ಮಠಗಳು,ಸಂಘ,ಸಂಸ್ಥೆಗಳಿಂದ ನಡೆದಂತಹ ಋಕ್ಸಂಹಿತಾ ಯಾಗಗಳು,ವೇದಪಾರಾಯಣಗಳು, ಅತಿರುದ್ರ,ಮಹಾರುದ್ರ, ಸಹಸ್ರಚಂಡೀ,ಶತಚಂಡೀ ಮಹಾಯಾಗಗಳು ಹಾಗೂ ದೇವಸ್ಥಾನ. ಕುಂಭಾಭಿಷೇಕಗಳ ನೇತೃತ್ವವನ್ನು ವಹಿಸಿರುವುದು.

  • ಹಲವು ಸಂಪೂರ್ಣವೇದಪಾರಾಯಣಗಳು,ಕ್ರಮ, ಜಟಾ,ಘನಪಾರಾಯಣಗಳನ್ನು ಏರ್ಪಡಿಸಿರುವುದು.