ऋच॒:सामा॑नि॒ यजूग्ं॑षि ! सा हि श्रीर॒मृता॑ स॒ताम् !

श्री श्रुतिपरम्परा गुरुकुलम् - वेदपाठशाला

बेङ्गलूरु-६२

ವೇದವೆಂದರೆ ತಿಳುವಳಿಕೆ - ಜ್ಞಾನವೆಂದರ್ಥ

विदन्त्यनन्य प्रामाण्यवेद्यं धर्मलक्षणसामर्थ्यमस्मादिति वेदः

ಬೇರೆ ಯಾವುದೇ ಪ್ರಮಾಣಗಳಿಂದ ತಿಳಿಯಲು ಅಶಕ್ಯವಾದ ಧರ್ಮದ ಲಕ್ಷಣವನ್ನು ಇದರಿಂದ ತಿಳಿಯಬಹುದು.ಆದ್ದರಿಂದ ಇದಕ್ಕೆ ವೇದವೆಂಬ ಹೆಸರಾಯಿತು. ಸಮಗ್ರವಾಗಿದ್ದಂತಹ ವೇದಗಳನ್ನು ಭಗವಾನ್ ವೇದವ್ಯಾಸರು, ಯಜ್ಞ - ಯಾಗಾದಿಗಳ ಅನುಷ್ಠಾನಕ್ಕೆ - ಅಧ್ಯಯನಕ್ಕೆ ಅನುಕೂಲವಾಗುವಂತೆ ಋಕ್ - ಯಜುಸ್ - ಸಾಮ - ಅಥರ್ವಣವೇದಗಳೆಂಬುದಾಗಿ ವಿಭಜಿಸಿರುತ್ತಾರೆ. ಅನೂಚಾನವಾಗಿ ಋಷಿಗಳಿಂದ ದತ್ತವಾದಂತಹ ವೇದಗಳನ್ನು ಗುರುಗಳ ಸನ್ನಿಧಿಯಲ್ಲಿ ವಾಸಮಾಡುತ್ತಾ, ಗುರುಕುಲ ಪದ್ಧತಿಯಲ್ಲಿ ಆಚಾರ ನಿಷ್ಠರಾಗಿ ಸಂಪೂರ್ಣ ಅಧ್ಯಯನ ಮಾಡಿ, ತನ್ಮೂಲಕ ಲೋಕೋಪಕಾರಿಗಳಾಗಿ ಧರ್ಮಾಚರಣೆಯನ್ನು ಮಾಡುವಂತಹ ಸತ್ಪ್ರಜೆಗಳನ್ನು ಸಮಾಜಕ್ಕೆ ನೀಡಬೇಕೆಂಬ ಸಂಕಲ್ಪದಿಂದ ಶ್ರೀ ಶ್ರುತಿಪರಂಪರಾ ಗುರುಕುಲಮ್ (ರಿ) ವೇದಪಾಠಶಾಲೆಯನ್ನು ಪ್ರಾರಂಭಿಸಲಾಗಿದೆ. ಋಗ್ವೇದ ಮತ್ತು ಕೃಷ್ಣಯಜುರ್ವೇದ ಗಳನ್ನು ಗುರುಕುಲ ಪದ್ಧತಿಯಲ್ಲಿ ಅಧ್ಯಯನ ಮಾಡಲು ಅವಕಾಶವಿರುತ್ತದೆ. ಈ ಮಹತ್ಕಾರ್ಯದಲ್ಲಿ ವೇದಾಭಿಮಾನಿಗಳು ತಮ್ಮ ತನು-ಮನ-ಧನ ಸಹಾಯಗಳೊಂದಿಗೆ ಪ್ರೋತ್ಸಾಹಿಸಬೇಕಾಗಿ ಕೋರುತ್ತೇವೆ.